Loading your scene

Happy 4th yearAnniversary

Scroll Down

A Letter For You

ನನ್ನ ಪ್ರೀತಿಯ ಮುದ್ದುಮರಿಗೆ♥,

ನಾಲ್ಕು ವರ್ಷಗಳು ಹೇಗೆ ಕಳೆದವು ಅಂತನೇ ಗೊತ್ತಿಲ್ಲ ಅಲ್ಲವಾ. ಮೊದಲ ದಿನದಿಂದಲೇ ನೀನು ನನ್ನ ಜೊತೆ ಪ್ರತಿ ಹೆಜ್ಜೆಗೂ ನನಗೆ ಬೆನ್ನೆಲುಬಾಗಿ ನಿಂತಿದ್ದೀಯ.

ನಮ್ಮ ಈ ನಾಲ್ಕು ವರ್ಷದ ಪ್ರೀತಿಯಲ್ಲಿ ಹೆಚ್ಚು ಕೋಪ ಮಾಡಿಕೊಂಡಿದ್ದು ನಾನೇ — ಅದು ನನಗೆ ಚೆನ್ನಾಗಿ ಗೊತ್ತು. ಆದರೆ ಆ ಕೋಪಕ್ಕೆ ಕಾರಣನು ನೀನೆ , ಸಮಾಧಾನನು ನೀನೆ.

ನಾವಿಬ್ಬರು ಯಾವ ಕೆಲಸದಲ್ಲಿ ಇದ್ದರೂ, ಯಾವತ್ತೂ ಮಾತಾಡದೇ ಇದ್ದದ್ದೇ ಇಲ್ಲ. ಈ ನಾಲ್ಕು ವರ್ಷಗಳಲ್ಲಿ ನಾವು ಎಲ್ಲವನ್ನೂ ಎದುರಿಸಿ ಬಂದಿದ್ದೇವೆ — ಅದು ಕಷ್ಟವಾಗಿರಲಿ, ಸುಖವಾಗಿರಲಿ — ಇಬ್ಬರೂ ಒಬ್ಬರ ಕೈ ಹಿಡಿದು ಮುಂದೆ ಬಂದಿದ್ದೇವೆ.

ಹಾಗೆಯೇ ಇನ್ನು ನಮ್ಮ ಜೀವನಪೂರ್ತಿ ಇಬ್ಬರೂ ಜೊತೆಯಾಗಿ ಬದುಕಿ ಬಾಳಬೇಕು, ಸದಾ ಜೊತೆಯೇ ಇರಬೇಕು ಅನ್ನೋದೇ ನನ್ನ ಕೋರಿಕೆ.

ನಾವು ನಂಬಿರುವ ಆ ತಾಯಿ ಇದನ್ನೂ ಈಡೇರಿಸುತ್ತಾಳೆ ಎಂದು ನಾನು ನಂಬಿದ್ದೇನೆ. ಅವಳೇ ನಮ್ಮ ಈ ಪ್ರೀತಿಗೆ ಸಾಕ್ಷಿ🙏.

ಎಂದೆಂದಿಗೂ ಮತ್ತು ಯಾವಾಗಲೂ,
ನಿನ್ನ ಪ್ರೀತಿಯ
ಬುಬುಮ [ಭೈರೇಶ್ ಬಿ.ಎಸ್ / ಹರ್ಷವರ್ಧನ ಬಿ.ಎಸ್]

Across the Miles

Your City My City

"No matter the distance, my heart always finds you."

Why I Love You

"Click below to discover a reason…"